"एजुकेशन जीवन की तैयारी नहीं, यह अपने आप में ही एक जीवन है।" इस ब्लाग में हम शिक्षा के संबंध में कुछ प्रमुख जानकारी देने का प्रयास कर रहे है। We are provided some important educational Resources. please comment.

MY SLIDE

ರಾಷ್ಟ್ರೀಯ ಮತದಾರರ ದಿನ ಹಾಗೂ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ

 

ಸರಕಾರಿ ಸಂಯುಕ್ತ ಪ್ರೌಢಶಾಲೆ ರಾಜೀವನಗರ 80 ಬಡಗಬೆಟ್ಟು ಉಡುಪಿ ವಲಯ

ರಾಷ್ಟ್ರೀಯ ಮತದಾರರ ದಿನ ಹಾಗೂ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಕುರಿತು ವರದಿ



ದಿನಾಂಕ 25-01-2021 ರಂದು ಸರಕಾರಿ ಪ್ರೌಢಶಾಲೆ ರಾಜೀವನಗರ ಇಲ್ಲಿ ಗ್ರಾಮಪಂಚಾಯತ್ 80 ಬಡಗಬೆಟ್ಟು ಇವರ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ 10ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಶಂಕರಮ್ಮ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶ್ರೀಮತಿ ದೀಪಾ ರವರು ಹೆಣ್ಣುಮಕ್ಕಳ ಸುರಕ್ಷತೆಯ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು. ಸಂಪನ್ಮೂಲ ವ್ಯಕ್ತಿ ಶ್ರೀ ಜಯಂತ ರಾವ್ ರವರು ಮಕ್ಕಳ ಹಕ್ಕುಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು. ಸಭೆಯಲ್ಲಿ ನೇತ್ರ ತಜ್ಞರಾದ ಡಾ| ಶಕಿಲಾ ಸಚಿನ್, ಲಯನ್ಸ ಕ್ಲಬ್ ಸದಸ್ಯರಾದ ಶ್ರೀಮತಿ ಸರಿತಾ ಸಂತೋಷ್, ತಾಲೂಕು ಸಂಪನ್ಮೂಲ ಕೇಂದ್ರದ ಶ್ರೀ ವಿವೇಕ್, ಗ್ರಾಮಪಂಚಾಯತ್ ಪಿಡಿಓ ಶ್ರೀ ಅಶೋಕ್ ಕುಮಾರ್, ಕಾರ್ಯದರ್ಶಿ ಶ್ರೀಮತಿ ಶಕುಂತಳಾ, ಗ್ರಾಮಪಂಚಾಯತ್ ನೂತನ ಸದಸ್ಯರಾದ ಶ್ರೀ ಶಾಂತಾರಾಮ ಶೆಟ್ಟಿ, ಫ್ಲೋಸಿ ಫೆರ್ನಾಂಡಿಸ್, ಶ್ರೀಮತಿ ಶಾಂತಾ ಎನ್, ಶ್ರೀಮತಿ ಶಾಂತಾ ಪೂಜಾರಿ, ಶ್ರೀಮತಿ ನಿರುಪಮಾ ಶೆಟ್ಟಿ, ಶ್ರೀಮತಿ ಜ್ಯೋತಿ, ಶ್ರೀ ಕೇಶವ ಕೋಟ್ಯಾನ್, ಶ್ರೀ ಗಣಪತಿ ನಾಯಕ್ ಉಪಸ್ಥಿತರಿದ್ದರು. ಮಣಿಪಾಲ ಪೋಲಿಸ್ ಠಾಣೆಯ ಠಾಣಾಧಿಕಾರಿ ಶ್ರೀ ನಿರಂಜನ ಗೌಡ, ಮಹಿಳಾ ಪೋಲಿಸ್ ಶ್ರೀಮತಿ ನೇತ್ರಾವತಿ , ಸಂಸ್ಥೆಯ ಮುಖ್ಯ ಶಿಕ್ಷಕರಾದ ಶ್ರೀ ಬಾಲಕೃಷ್ಣ ಪಿ , ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ರವಿಕಲಾ ಇವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು ಮತ್ತು ಬಹುಮಾನಗಳನ್ನು ವಿತರಿಸಲಾಯಿತು. ಶ್ರೀ ಸಂಜೀವ ನಾಯಕ್ ಕಾರ್ಯಕ್ರಮ ನಿರೂಪಿಸಿದರು, ಶ್ರೀ ರವೀಂದ್ರ ಕುಮಾರ್ ವಂದಿಸಿದರು.


ಚಿತ್ರಕಲಾ ಸ್ಪರ್ಧೆ



ಸಂಗೀತ ಕುರ್ಚಿ ಸ್ಪರ್ಧೆ
 

ಕಬಡ್ಡಿ ಸ್ಪರ್ಧೆ
 




ಪ್ರಬಂಧ ಸ್ಪರ್ಧೆ






                                                   ತ್ರೊಬಾಲ್


ಭಾಷಣ ಸ್ಪರ್ಧೆ


  




d40853dc-7c0d-407f-8a43-edb53c151427.jpg


f0e7c631-f021-4ea4-972f-63f8bf74fa91.jpg


 

No comments:

Post a Comment

please give feedback your reviews, comments which helps me to better in future

khadi payee wale shabd