1. ನಾನು ಮತ್ತು ನನ್ನ ಜೀವನ
1. ನನ್ನ ಬಾಲ್ಯ
ಬಾಲ್ಯ ಎನ್ನುವುದು ಪ್ರತಿಯೊಬ್ಬರ ಜೀವನದ ಪ್ರಮುಖ ಘಟ್ಟ. ನಾನು ಜನಿಸಿದ್ದು ಡಿಸೆಂಬರ್ 20 1975 ರಲ್ಲಿ. ಉಡುಪಿ ತಾಲೂಕಿನ ಹಿರಿಯಡ್ಕ ಸಮೀಪದ ಹೇಮಮಜಲು ಎಂಬಲ್ಲಿ. ನನ್ನ ಜನನದ ವರ್ಷ ನಮ್ಮ ಅಜ್ಜಿ ಮನೆ ಕಟ್ಟಿದ್ದು. ಹಾಗಾಗಿ ನನ್ನ ಶಿಶು ಆರೈಕೆ ಆರಂಭ ಆಗಿದ್ದು ಮನೆಯ ಹೊರಗಿನ ಚಪ್ಪರದಲ್ಲಿ. ಆ ಕಾಲದಲ್ಲಿ ಆಸ್ಪತ್ರೆಗಳಿಗೆ ಹೋಗುವ ಪದ್ಧತಿ ಇರಲಿಲ್ಲ. ಹಾಗಾಗಿ ನನ್ನ ಪ್ರಸವ ಮಾಡಿಸಿದವರು ನಮ್ಮ ಊರಿನವರಾದ ನೇತ್ರಾವತಿಯವರು. ಅವರು ಆ ಏರಿಯಾದ ಹೆಚ್ಚಿನ ಪ್ರಸವಗಳನ್ನು ಮಾಡಿಸಿದ್ದವರು. ನಮ್ಮ ಮನೆ ಹುಲ್ಲಿನಿಂದ ಕಟ್ಟಿದ ಮನೆಯಾಗಿತ್ತು. ನೆಲ ಮಣ್ಣಿನದ್ದು. ನಮ್ಮ ಅಜ್ಜಿ(ತಂದೆಯ ತಾಯಿ) ದಿನಾ ಸೆಗಣಿ ಸಾರಿಸುತ್ತಿದ್ದರು. ಹಾಗಾಗಿ ನೆಲ ತುಂಬಾ ತಂಪಾಗಿರುತ್ತಿತ್ತು.
2.ಪ್ರಾಥಮಿಕ ಶಾಲಾ ಜೀವನ
3.ಪ್ರೌಢಶಾಲಾ ಜೀವನ
4.ಕಾಲೇಜು ಜೀವನ