Pages

TV CHANNELS

Topper in PUC Result

 

        KARNATAKA PUBLIC SCHOOL HIRIADKA  

            🌟Congratulations🌟

ಉಡುಪಿ: ರಾಜ್ಯ ಪದವಿ ಪೂರ್ವ ಶಿಕ್ಷಣ ಇಲಾಖೆ ಇತ್ತೀಚೆಗೆ ಪ್ರಕಟಿಸಿದ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಹಿರಿಯಡ್ಕದ ಕರ್ನಾಟಕ ಪಬ್ಲಿಕ್ ಸ್ಕೂಲ್ (ಸರ್ಕಾರಿ ಪದವಿ ಪೂರ್ವ ಕಾಲೇಜು) ಅಪೂರ್ವ ಸಾಧನೆ ಮಾಡಿದೆ. ಈ ಶಾಲೆಯ ಪ್ರತಿಭಾವಂತ ವಿದ್ಯಾರ್ಥಿನಿ ಕುಮಾರಿ ಸಜನಿ ಅವರು ಒಟ್ಟು 600 ಅಂಕಗಳಿಗೆ 591 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ 9ನೇ ಸ್ಥಾನ ಅಲಂಕರಿಸಿದ್ದಾರೆ.


ಗ್ರಾಮೀಣ ಭಾಗದ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿಯೂ ಸಜನಿ ಅವರು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುವುದು ಜಿಲ್ಲೆಗೆ ಹೆಮ್ಮೆ ತಂದಿದೆ. ಕೇವಲ ಅಂಕಗಳಿಕೆಯಲ್ಲಿ ಮಾತ್ರವಲ್ಲದೆ, ವಿಷಯವಾರು ಸಾಧನೆಯಲ್ಲೂ ಸಜನಿ ಅವರು ಮುಂಚೂಣಿಯಲ್ಲಿದ್ದಾರೆ. ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾದ ಇವರು ಅತ್ಯಂತ ಕಠಿಣವೆನ್ನಲಾಗುವ ಗಣಿತ ಹಾಗೂ ಭಾಷಾ ವಿಷಯವಾದ ಕನ್ನಡದಲ್ಲಿ 100ಕ್ಕೆ 100 ಅಂಕಗಳನ್ನು ಗಳಿಸಿ ಎಲ್ಲರ ಗಮನ ಸೆಳೆದಿದ್ದಾರೆ

.


No comments:

Post a Comment

please give feedback your reviews, comments which helps me to better in future