ಸರಕಾರಿ ಸಂಯುಕ್ತ ಪ್ರೌಢಶಾಲೆ ರಾಜೀವನಗರ 80 ಬಡಗಬೆಟ್ಟು
ಉಡುಪಿ ವಲಯ
ರಾಷ್ಟ್ರೀಯ ಮತದಾರರ ದಿನ ಹಾಗೂ ರಾಷ್ಟ್ರೀಯ
ಹೆಣ್ಣುಮಕ್ಕಳ ದಿನಾಚರಣೆ ಕುರಿತು ವರದಿ
ದಿನಾಂಕ 25-01-2021 ರಂದು
ಸರಕಾರಿ ಪ್ರೌಢಶಾಲೆ ರಾಜೀವನಗರ ಇಲ್ಲಿ ಗ್ರಾಮಪಂಚಾಯತ್ 80 ಬಡಗಬೆಟ್ಟು ಇವರ
ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ 10ನೇ ತರಗತಿಯ ವಿದ್ಯಾರ್ಥಿನಿ
ಕುಮಾರಿ ಶಂಕರಮ್ಮ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಮಹಿಳಾ
ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶ್ರೀಮತಿ ದೀಪಾ ರವರು ಹೆಣ್ಣುಮಕ್ಕಳ ಸುರಕ್ಷತೆಯ ಕುರಿತು ವಿದ್ಯಾರ್ಥಿಗಳಿಗೆ
ವಿವರಿಸಿದರು. ಸಂಪನ್ಮೂಲ ವ್ಯಕ್ತಿ ಶ್ರೀ ಜಯಂತ ರಾವ್ ರವರು ಮಕ್ಕಳ ಹಕ್ಕುಗಳ
ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು. ಸಭೆಯಲ್ಲಿ ನೇತ್ರ ತಜ್ಞರಾದ
ಡಾ| ಶಕಿಲಾ ಸಚಿನ್, ಲಯನ್ಸ ಕ್ಲಬ್ ಸದಸ್ಯರಾದ
ಶ್ರೀಮತಿ ಸರಿತಾ ಸಂತೋಷ್, ತಾಲೂಕು ಸಂಪನ್ಮೂಲ ಕೇಂದ್ರದ ಶ್ರೀ ವಿವೇಕ್,
ಗ್ರಾಮಪಂಚಾಯತ್ ಪಿಡಿಓ ಶ್ರೀ ಅಶೋಕ್ ಕುಮಾರ್, ಕಾರ್ಯದರ್ಶಿ
ಶ್ರೀಮತಿ ಶಕುಂತಳಾ, ಗ್ರಾಮಪಂಚಾಯತ್ ನೂತನ ಸದಸ್ಯರಾದ ಶ್ರೀ ಶಾಂತಾರಾಮ ಶೆಟ್ಟಿ,
ಫ್ಲೋಸಿ ಫೆರ್ನಾಂಡಿಸ್, ಶ್ರೀಮತಿ ಶಾಂತಾ ಎನ್,
ಶ್ರೀಮತಿ ಶಾಂತಾ ಪೂಜಾರಿ, ಶ್ರೀಮತಿ ನಿರುಪಮಾ ಶೆಟ್ಟಿ,
ಶ್ರೀಮತಿ ಜ್ಯೋತಿ, ಶ್ರೀ ಕೇಶವ ಕೋಟ್ಯಾನ್, ಶ್ರೀ ಗಣಪತಿ ನಾಯಕ್ ಉಪಸ್ಥಿತರಿದ್ದರು. ಮಣಿಪಾಲ ಪೋಲಿಸ್ ಠಾಣೆಯ
ಠಾಣಾಧಿಕಾರಿ ಶ್ರೀ ನಿರಂಜನ ಗೌಡ, ಮಹಿಳಾ ಪೋಲಿಸ್ ಶ್ರೀಮತಿ ನೇತ್ರಾವತಿ
, ಸಂಸ್ಥೆಯ ಮುಖ್ಯ ಶಿಕ್ಷಕರಾದ ಶ್ರೀ ಬಾಲಕೃಷ್ಣ ಪಿ , ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ರವಿಕಲಾ ಇವರು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು ಮತ್ತು ಬಹುಮಾನಗಳನ್ನು ವಿತರಿಸಲಾಯಿತು.
ಶ್ರೀ ಸಂಜೀವ ನಾಯಕ್ ಕಾರ್ಯಕ್ರಮ ನಿರೂಪಿಸಿದರು, ಶ್ರೀ
ರವೀಂದ್ರ ಕುಮಾರ್ ವಂದಿಸಿದರು.
ತ್ರೊಬಾಲ್














No comments:
Post a Comment
please give feedback your reviews, comments which helps me to better in future