ನಮ್ಮ ದೈನಂದಿನ ಜೀವನದಲ್ಲಿ ಟ್ರಾಫಿಕ್ ಒಂದು ಅವಿಭಾಜ್ಯ ಘಟಕವಾಗಿ ಪರಿಣಮಿಸಿದೆ. ನಾವು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಾಹನಗಳಲ್ಲಿ ತೆರಳುವಾಗ ಟ್ರಾಫಿಕ್ ನಿಯಮಗಳನ್ನು ಕಡ್ಡಾಯವಾಗಿ ಅನುಸರಿಸುವುದು ಅತಿ ಅಗತ್ಯವಾಗಿದೆ.
ಹಾಗಿರುವಾಗ ಎಷ್ಟೋ ಜನರು ಮೂಲಭೂತ ಟ್ರಾಫಿಕ್ ಸಂಕೇತಗಳ ಬಗ್ಗೆ ಅರಿವನ್ನು ಹೊಂದಿರುವುದಿಲ್ಲ. ಇದು ಕೆಲವೊಂದು ಬಾರಿ ಅಪಘಡಕ್ಕೆ ಕಾರಣವಾಗಬಲ್ಲದು. ಈ ನಿಟ್ಟಿನಲ್ಲಿ ಚಿಂತನೆ ಮಾಡಿರುವ ನಮ್ಮ ಡ್ರೈವ್ ಸ್ಪಾರ್ಕ್ ತಂಡ ರಸ್ತೆ ಸಿಗ್ನಲ್ಗಳ ಬಗ್ಗೆ ವಿಸ್ತಾರವಾಗಿ ಹೇಳಿಕೊಡುವ ಪ್ರಯತ್ನ ಮಾಡಲಿದ್ದೇವೆ.
ಸುರಕ್ಷಿತ ಪಯಣದಲ್ಲಿ ರಸ್ತೆ ಸಂಚಾರ ಚಿಹ್ನೆಗಳು ಬಹುದೊಡ್ಡ ಪಾತ್ರ ವಹಿಸುತ್ತದೆ. ಇಂಡಿಯನ್ ರೋಡ್ ಕಾಂಗ್ರೆಸ್ (ಐಆರ್ಸಿ) ಪ್ರಕಾರ ಭಾರತದಲ್ಲಿ ರಸ್ತೆ ಸಂಚಾರ ಚಿಹ್ನೆಗಳನ್ನು ಒಟ್ಟು ಮೂರು ವಿಭಾಗಗಳಾಗಿ ವಿಭಜಿಸಲಾಗಿದೆ. ಅವುಗಳೆಂದರೆ,
· ಕಡ್ಡಾಯ ಚಿಹ್ನೆಗಳು (Mandatory signs or regulatory signs)
· ಎಚ್ಚರಿಕಾ ಚಿಹ್ನೆಗಳು (cautionary signs or warning or precautionary)
· ಮಾಹಿತಿ ಚಿಹ್ನೆಗಳು (informatory signs)
ಇನ್ನು ಮೇಲೆ ತಿಳಿಸಿದ ಮೂರು ಚಿಹ್ನೆಗಳನ್ನು ಗುರುತಿಸುವುದು ತುಂಬಾನೇ ಸುಲಭ. ಕಡ್ಡಾಯ ಚಿಹ್ನೆಗಳು ವೃತ್ತಕಾರದಲ್ಲೂ, ಎಚ್ಚರಿಕಾ ಚಿಹ್ನೆಗಳು ತ್ರಿಕೋನಾಕೃತಿಯಲ್ಲೂ ಮತ್ತು ಮಾಹಿತಿ ಚಿಹ್ನೆಗಳು ಆಯತಾಕಾರದಲ್ಲೂ ಕಂಡುಬರಲಿದೆ.
ವಿ.ಸೂ: ಇಂದಿನ ಈ ಲೇಖನದಲ್ಲಿ ಕಡ್ಡಾಯ ಚಿಹ್ನೆಗಳ ಬಗ್ಗೆ ವಿಸೃತವಾಗಿ ಚರ್ಚಿಸಲಿದ್ದೇವೆ. ಹಾಗೆಯೇ ಇದರ ಮುಂದುವರಿದ ಲೇಖನಗಳಲ್ಲಿ ಎಚ್ಚರಿಕಾ ಹಾಗೂ ಮಾಹಿತಿ ಚಿಹ್ನೆಗಳ ಬಗ್ಗೆ ಸಂಪೂರ್ಣ ಮಾಹಿತಿ ಕೊಡಲಿದ್ದೇವೆ. ಇದಕ್ಕಾಗಿ ಸದಾ ಡ್ರೈವ್ ಸ್ಪಾರ್ಕ್ ಓದುತ್ತಿರಿ...
Stop
ನಿಲ್ಲಿ
Give Way
ದಾರಿ ಬಿಡಿ
No Entry
ಪ್ರವೇಶವಿಲ್ಲ
One Way
ಒಂದೇ ದಾರಿ
ವಾಹನಗಳನ್ನು ನಿಷೇಧಿಸಿದೆ
All M.V.s prohibited
ಎಲ್ಲ ಮೋಟಾರು ಅಥವಾ ವಾಹನಗಳನ್ನು ನಿಷೇಧಿಸಿದೆ.
Trucks Prohibited
ಟ್ರಕ್ಕುಗಳನ್ನು ನಿಷೇಧಿಸಿದೆ.
Bullock carts & hand carts prohibited
ಎತ್ತಿನಗಾಡಿ ಮತ್ತು ಕೈಗಾಡಿಗಳನ್ನು ನಿಷೇಧಿಸಿದೆ.
Tongas Prohibited
ಟಾಂಗಗಳನ್ನು ನಿಷೇಧಿಸಿದೆ.
Hand Carts Prohibited
ಕೈಗಾಡಿಗಳನ್ನು ನಿಷೇಧಿಸಿದೆ.
Cycle Prohibited
ಸೈಕಲ್ಲು ನಿಷೇಧಿಸಿದೆ.
pedestrians prohibited
ಪಾದಚಾರಿಗಳು ನಿಷೇಧಿಸಿದೆ.
Right Turn Prohibited
ಬಲಕ್ಕೆ ತಿರುವು ನಿಷೇಧಿಸಿದೆ.
Left turn Prohibited
ಎಡಕ್ಕೆ ತಿರುವು ನಿಷೇಧಿಸಿದೆ.
U Turn Prohibited
'U' ತಿರುವು ನಿಷೇಧಿಸಿದೆ.
Overtaking Prohibited
ಹಠಾತ್ತಾಗಿ ಮುಂದೆ ಹೋಗುವುದು (ಓವರ್ಟೇಕಿಂಗ್) ನಿಷೇಧಿಸಿದೆ.
Horns Prohibited
ಶಬ್ದಮಾಡುವುದು (ಹಾರ್ನ್) ನಿಷೇಧಿಸಿದೆ.
No Parking
ನಿಲುಗಡೆ (ಪಾರ್ಕಿಂಗ್) ನಿಷೇಧಿಸಿದೆ.
No Stopping or Standing
ವಾಹನಗಳನ್ನು ನಿಲ್ಲಿಸಕೂಡದು
Speed Limit
ವೇಗದ ಮಿತಿ- ಗಂಟೆಗೆ 50 ಕೀ.ಮೀ.
Width Limit
ಅಗಲ ಮಿತಿ
Height Limit
ಎತ್ತರ ಮಿತಿ
Length Limit
ಉದ್ದ ಮಿತಿ
Load Limit
ಭಾರ ಮಿತಿ
Axle Load Limit
ಎಕ್ಸಿಲ್ ಭಾರಮಿತಿ
Restiction End Sign
ನಿರ್ಬಂಧ ಕೊನೆ ಚಿಹ್ನೆ
Compulsory Turn Left
ಕಡ್ಡಾಯ ಎಡ ತಿರುವು
Compulsory Turn Ahead
ಕಡ್ಡಾಯ ನೇರ ಮಾತ್ರ
Compulsory Turn Right
ಕಡ್ಡಾಯ ಬಲ ತಿರುವು
Compulsory Ahead Or Turn Right
ಮುಂದಕ್ಕೆ ಹೋಗಿ ಅಥವಾ ಬಲಕ್ಕೆ
Compulsory ahead Or left
ಮುಂದಕ್ಕೆ ಹೋಗಿ ಅಥವಾ ಎಡಕ್ಕೆ
Compulsory Go Left
ಕಡ್ಡಾಯ ಎಡದಿಂದ ಚಲಿಸಿ
Compulsory Cycle Track
ಸೈಕಲ್ಲುಗಳು ಹೋಗಲೇಬೇಕಾದ ದಾರಿ
Compulsory Horn
ಶಬ್ದ ಮಾಡಲೇಬೇಕು
ಸುರಕ್ಷತಾ ದೃಷ್ಟಿಕೋನದಲ್ಲಿ ರಸ್ತೆಗಳಲ್ಲಿ ಹಲವು ವಿಧÀದ ಬಣ್ಣಗಳೊಂದಿಗೆ ಗುರುತುಗಳನ್ನು ಹಚ್ಚಲಾಗಿರುತ್ತದೆ. ಇವುಗಳನ್ನು ವಾಹನ ಸವಾರರು ತಪ್ಪದೇ ಪಾಲಿಸಬೇಕಾಗುತ್ತದೆ. ಈ ಮೂಲಕ ಅಪಘಾತಗಳನ್ನು ಸಾಧ್ಯವಾದಷ್ಟು ತಡೆಗಟ್ಟಬಹುದಾಗಿದೆ. ನಮ್ಮ ದೈನಂದಿನ ಸವಾರಿಂುÀು ವೇಳೆಂುÀುಲ್ಲಿ ರಸ್ತೆಂುÀುನ್ನು ವಿಭÀಜಿಸುವ ಬಿಳಿ ರೇಖೆೆಗಳು ಅಥವಾ ಹಳದಿ ರೇಖೆಗಳನ್ನು ನೋಡಿರಬಹುದು. ಅಷ್ಟಕ್ಕೂ ರಸ್ತೆಗಳಲ್ಲಿರುವ ಇಂತಹ ಗುರುತು ರೇಖೆೆಗಳು ಏನನ್ನು ಸೂಚಿಸುತ್ತದೆ ಗೊತ್ತೇನು ? ಈ ಸಂಬಂಧÀ ವಿಸೃತ ಮಾಹಿತಿಂುÀುನ್ನು ಇಲ್ಲಿ ಕಲೆ ಹಾಕಲಾಗಿದೆ. ಒಡೆದು ಹೋದ ಶ್ವೇತ ವರ್ಣದ ರೇಖೆೆ ರಸ್ತೆಂುÀು ಎರಡು ಭಾಗಗಳಿಂದ ಬರುವ ವಾಹನಗಳ ಸುಗಮ ಸಂಚಾರಕ್ಕಾಗಿ ಒಡೆದು ಹೋದ ಶ್ವೇತ ವರ್ಣದ ರೇಖೆೆಂುÀುನ್ನು ಮದ್ಯ ಭಾಗದಲ್ಲಿ ರಸ್ತೆ ಛೇದಕವಾಗಿ ನೀಡಲಾಗಿದೆ. ಹಾಗಿದ್ದರೂ ಅಗಲ ಕಿರಿದಾದ ರಸ್ತೆಗಳಲ್ಲಿ ಇಂತಹ ವಿಭÀಜಕಗಳು ಕಾಣಸಿಗಬೇಕೆಂದಿಲ್ಲ. ನಡು ರಸ್ತೆಂುÀುಲ್ಲಿ ಒಂದು ಅಥವಾ ಎರಡು ಬಿಳಿ/ಹಳದಿ ರೇಖೆೆಗಳು ಎಲ್ಲ ವಾಹನಗಳು ರಸ್ತೆಂುÀು ಎಡಭಾಗದಲ್ಲಿ ಸಂಚರಿಸಬೇಕು ಎಂಬುದನ್ನು ಇದು ಸೂಚಿಸುತ್ತದೆ. ಅಲ್ಲದೆ ಓವರ್ ಟೆೇಕಿಂಗ್ ಇಲ್ಲಿ ನಿಷೇಧÀವಾಗಿದೆ. ತುರ್ತು ವಾಹನಗಳು ಮಾತ್ರ ಓವರ್ ಟೆೇಕಿಂಗ್ ಮಾಡಬಹುದಾಗಿದೆ. ರಸ್ತೆ ಬದಿಂುÀುಲ್ಲಿ ಶ್ವೇತ ವರ್ಣದ ರೇಖೆ ರಸ್ತೆಂುÀು ಕೊನೆಂುÀುನ್ನು ಇದು ಸೂಚಿಸುತ್ತದೆ. ಇದನ್ನು ದಾಟಿ ಎಡಭಾಗದಲ್ಲಿ ಸಂಚರಿಸುವುದು ಅವಘಡವನ್ನು ಆಹ್ವಾನಿಸಿದಂತಾಗುತ್ತದೆ. ಇದರಲ್ಲಿ ಪ್ರತಿಫÀಲಕಗಳನ್ನು ಬಳಸಲಾಗುತ್ತಿದ್ದು, ರಾತ್ರಿ ಸವಾರಿಂುÀುನ್ನು ಸುಲಭÀವಾಗಿಸುತ್ತದೆ. ತುಂಡರಿಸಲ್ಪಟ್ಟ ಹಳದಿ ರೇಖೆೆ ರಸ್ತೆ ಮದ್ಯದಲ್ಲಿ ನೇರವಾಗಿ ಹಾದು ಹೋಗುವ ಹಳದಿ ರೇಖೆೆಂುÀು ಬದಿಂುÀುಲ್ಲಿ ತುಂಡರಿಸಲ್ಪಟ್ಟ ಹಳದಿ ವರ್ಣದ ರೇಖೆೆಂುÀುು ವಿಶೇಷವಾದ ಸಂಚಾರ ಸೂಚನೆಂುೊಂದನ್ನು ನೀಡುತ್ತದೆ. ಇಲ್ಲಿ ನೇರವಾಗಿ ಹಾದು ಹೋಗುವ ರೇಖೆಂುÀುಲ್ಲಿ ಮುನ್ಮುSವಾಗಿ ಚಲಿಸುವ ವಾಹನಕ್ಕೆ ಓವರ್ ಟೆೇಕ್ ಮಾಡುವ ಅವಕಾಶವಿರುವುದಿಲ್ಲ. ಹಾಗೊಂದು ವೇಳೆ ತುಂಡರಿಲಸ್ಪಟ್ಟ ಹಳದಿ ರೇಖೆೆಂುÀು ಬದಿಯಿಂದ ಮುಂದಕ್ಕೆ ಚಲಿಸುವುದಾದ್ದಲ್ಲಿ ಸುರಕ್ಷಿತವೆನಿಸಿದ್ದಲ್ಲಿ ಓವರ್ ಟೆೇಕ್ ಮಾಡಬಹುದಾಗಿದೆ. ಝಿಬ್ರಾ ಕ್ರಾಸಿಂಗ್ ಮತ್ತು ನಿಲುಗಡೆ ಸೂಚನೆ ನಿಮಗೆಲ್ಲರಿಗೂ ತಿಳಿದಿರುವಂತೆಂುೆುೕ ರಸ್ತೆ ಮಧÀ್ಯದಲ್ಲಿ ಕಪ್ಪು ಬಿಳುಪಿನಿಂದ ಕೂಡಿದ ಝಿಬ್ರಾ ಕ್ರಾಸಿಂಗ್ ರೇಖೆೆಂುÀುು ಪಾದಚಾರಿಗಳಿಗೆ ರಸ್ತೆ ದಾಟಲು ನೆರವಾಗುತ್ತದೆ. ವಾಹನಗಳು ಕಡ್ಡಾಂುÀುವಾಗಿ ಝಿಬ್ರಾ ಕ್ರಾಸಿಂಗ್ ಚಿಹ್ನೆಂುÀು ಹಿಂದುಗಡೆಂುೆುೕ ವಾಹನಗಳನ್ನು ನಿಲುಗಡೆಗೊಳಿಸಬೇಕು. ಲೇನ್ ಸೂಚಕ ರಸ್ತೆಂುÀುಲ್ಲಿರುವ ಲೇನ್ ಸೂಚಕಗಳನ್ನು ಕ್ರಮಬದ್ಧವಾಗಿ ಪಾಲಿಸಬೇಕು. ಇಲ್ಲಿ ಮುಂದಕ್ಕೆ ಗುರುತಿರುವ ಬಾಣವು ನೇರವಾಗಿ ಮುಂದಕ್ಕೆ ಚಲಿಸಲು ಹಾಗೂ ಬಲಕ್ಕೆ ತಿರುಗಿದ ಬಾಣವು ಬಲಕ್ಕೆ ತಿರುಗುವ ವಾಹನಗಳಿಗೆ ಸೂಚನೆ ನೀಡುತ್ತದೆ. ಇದಕ್ಕನುಗುಣವಾಗಿ ವಾಹನಗಳು ಲೇನ್ ಗಳಲ್ಲಿ ತಪ್ಪದೇ ಚಲಿಸಬೇಕು. ಒಟ್ಟಿನಲ್ಲಿ ರಸ್ತೆಗಳಲ್ಲಿ ಸುಗಮ ಸಂಚಾರಕ್ಕಾಗಿ ವಿವಿಧÀ ಪ್ರಕಾರದ ರೇಖೆಗಳನ್ನು ಆಳವಡಿಸಲಾಗುತ್ತದೆ. ಇದನ್ನೆಲ್ಲ ಚಾಲಕ ಬಹಳ ಸಂಂುÀುಮದಿಂದ ಪಾಲಿಸಬೇಕು.
ಸಂಚಾರಿ ನಿಯಮಗಳು
ಟ್ರಾಫಿಕ್ ರೂಲ್ಸ್ :
1. ವಾಹನ ಚಲಾಯಿಸಲು ಕಲಿಯಲು ಇಚ್ಛಿಸುವವರು ಮೊದಲು ಎಲ್ಎಲ್ಆರ್ ಹೊಂದಿರಬೇಕು.
2. ಕಾನೂನಿನ ಪ್ರಕಾರ ವಾಹನದ ಮುಂಬದಿಯಲ್ಲಿ ಮತ್ತು ಹಿಂಬದಿಯಲ್ಲಿ ಬಿಳಿ ಹಲಗೆಯ ಮೇಲೆ ಕಾಣಿಸುವ ರೀತಿಯಲ್ಲಿ 7” ಘಿ 7” (17 ಛಿ.m. ಘಿ 17 ಛಿ.m) ಐ ಎಂದು ಕೆಂಪು ಬಣ್ಣದ ಅಕ್ಷರದಲ್ಲಿ 4 ಸೆ.ಮೀ ಎತ್ತರದ ಮತ್ತು 3.5 ಅಗಲದಲ್ಲಿ ನಮೂದಿಸಿರಬೇಕು.
3. ಯಾವಾಗಲೂ ಐಐಖ ಅನ್ನು ವಾಹನ ಚಲಾಯಿಸುವಾಗ ಬಳಿ ಇಟ್ಟುಕೊಂಡರಬೇಕು.
4. ಈ ಪರವಾನಿಗೆ ಪತ್ರ ಕೇವಲ 6 ತಿಂಗಳು ಮಾತ್ರ ಚಲಾವಣೆಯಲ್ಲಿರುತ್ತದೆ.
5. ಈ ಪತ್ರವು ಕೇವಲ ಒಂದೇ ರಾಜ್ಯಕ್ಕೆ ಮೀಸಲಾಗಿರುತ್ತದೆ.
6. ಈ ಪರವಾನಿಗೆ ಪತ್ರಕ್ಕೆ ಪಡೆಯಲು 18 ವರ್ಷ ಕಡ್ಡಾಯವಾಗಿ ಆಗಿರಬೇಕು.
ಕಾರು ಚಲಾವಣೆಗೆ ಐಐಖ:
ಕಾರು ಚಲಾಯಿಸಲು ಕಲಿಯುವಾಗ ಕಲಿಸುವ ವ್ಯಕ್ತಿ ಕಡ್ಡಾಯವಾಗಿ ವಾಹನ ಚಲಾವಣೆ ಪ್ರಮಾಣ ಪತ್ರ ಹೊಂದಿರಬೇಕು.
ವಾಹನ ಚಾಲನಾ ಪ್ರಮಾಣ ಪತ್ರ :
1. ವಾಹನದ ಗಾತ್ರದ ಮೇಲೆ (ಲಘು & ಬಾರಿ) ಚಾಲನಾ ಪರವಾನಗಿ ಪತ್ರ ನೀಡಲಾಗುವುದು.
2. ನಿರ್ಧಿಷ್ಟ ಕಾಲಾವಧಿ ಮುಗಿದ ಮೇಲೆ ಮತ್ತೆ ನವೀಕರಿಸಬೇಕಿರುತ್ತದೆ.
3. ಚಾಲನಾ ಪರವಾನಗಿ ಪತ್ರ ಪಡೆಯಲು ಕಡ್ಡಾಯವಾಗಿ 18 ವರ್ಷ ಆಗಿರಲೇಬೇಕು.
4. ಚಾಲಕನಾಗಿ ವೃತ್ತಿ ನಿರ್ವಹಿಸುವವನಾಗಿದ್ದರೆ ಕನಿಷ್ಟ 20 ವರ್ಷ ಆಗಿರಲೇಬೇಕು.
5. ನಿರ್ಧಿಷ್ಟ ವಾಹನ ಚಲಾಯಿಸಲು ಪ್ರಮಾಣ ಪತ್ರವು ನಮ್ಮ ದೇಶದಲ್ಲಿ ಎಲ್ಲೆಡೆ ಮಾನ್ಯ ಆಗಿರುತ್ತದೆ.
ವಾಹನ ಚಲಾಯಿಸುವಾಗ ಗಮನದಲ್ಲಿರಬೇಕಾದ ಅಂಶಗಳು :
1. ವಾಹನ ಕಡ್ಡಾಯವಾಗಿ ನೊಂದಣಿಯಾಗಿರಬೇಕು.
2. ನೊಂದಣಿ ಸಂಖ್ಯೆ ನಿಚ್ಚಳವಾಗಿ ನಿಖರವಾಗಿ ಕಾಣುವಂತಿರಬೇಕು.
3. ವಾಹನ ವಿಮಾ ಹೊಂದಿರಬೇಕು.
4. ರಸ್ತೆಯಲ್ಲಿ ಚಲಾಯಿಸುವ ಸುಸ್ಥಿತಿಯಲ್ಲಿ ವಾಹನ ಇರಬೇಕು. ಇಲ್ಲದಾದಲ್ಲಿ ನಮ್ಮ ಪ್ರಾಣ ಮತ್ತು ಇತರರ ಪ್ರಾಣಕ್ಕೆ ಕುತ್ತು ತಂದಿತು.
5. ಪಾನಮತ್ತರಾಗಿ ವಾಹನ ಚಲಾಯಿಸಬಾರದು.
6. ವಾಹನ ಚಲಾವಣೆ ಪರವಾನಿಗೆ ಪತ್ರದಲ್ಲಿ ನಮೂದಿಸಿದ ಗಾಡಿಯನ್ನು ಮಾತ್ರ ನೀವು ಚಲಾಯಿಸಲು ಅರ್ಹರಿರುತ್ತೀರಿ.
7. ಮಾನಸಿಕವಾಗಿ ಮತ್ತು ದೈಹಿಕವಾಗಿ ವಾಹನ ಚಲಾಯಿಸಲು ಅರ್ಹರಿರಬೇಕು.
ಚಲಾಯಿಸುವ ಕಾರು ಈ ಕೆಳಕಂಡ ಅಂಶಗಳನ್ನು ಹೊಂದಿರಬೇಕು.
1. ನೊಂದಣಿಯಾಗಿರಬೇಕು.
2. ನಂಬರ್ ಪ್ಲೇಟ್, ಹೆಡ್ಲೈಟ್ ಮುಂತಾದವುಗಳನ್ನು ಹೊಂದಿರಬೇಕು.
3. ಸೂರ್ಯಾಸ್ತದ 1 ಗಂಟೆಯ ನಂತರ ಸೂರ್ಯೋದಯದ 1 ಗಂಟೆ ಮುಂಚಿತವಾಗಿ ವಾಹನದ ಲೈಟ್ಗಳನ್ನು ಹಾಕಿಕೊಂಡು ಚಲಾಯಿಸಬೇಕು.
4. ಬ್ರೇಕ್ಗಳು ಸಧೃಢವಾಗಿರಬೇಕು.
5. ವಾಹನದ ಟೈರ್ಗಳು ಒಳ್ಳೆಯ ಸ್ಥಿತಿಯಲ್ಲಿರಬೇಕು.
6. ವಾಹನದ ಗಂಟೆ ಸರಿಯಾಗಿ ಕೆಲಸ ಮಾಡುತ್ತಿರಬೇಕು.
7. ಸ್ಟಿಯರಿಂಗ್ ಸರಿಯಾಗಿ ಕೆಲಸ ನಿರ್ವಹಿಸಬೇಕು.
ಟ್ರಾಫಿಕ್ ಪೊಲೀಸ್ನವರು ನಿಮ್ಮ ವಾಹನ ಮತ್ತು ನಿಮ್ಮ ಚಲಾವಣೆ ಪತ್ರದ ದಾಖಲಾತಿಗಳನ್ನು ಪರಿಶೀಲಿಸಬಹುದು ಮತ್ತು ನಿಮಗೆ ವಾಹನ ಚಲಾವಣೆಯ ಕುರಿತು ಸೂಕ್ತ ನಿರ್ದೇಶನಗಳನ್ನು ನೀಡಬಹುದು. ಈ ಆದೇಶಗಳನ್ನು ಪಾಲಿಸುವುದು ಮುಖ್ಯವಾಗಿರುತ್ತದೆ. ಸಿಗ್ನಲ್ ಬಳಿ ಟ್ರಾಫಿಕ್ ಪೊಲೀಸ್ನವರ ನಿರ್ಧಾರವೇ ಅಂತಿಮವಾಗಿರುತ್ತದೆ. ನೀವು ನಿಮ್ಮ ವಾಹನವನ್ನು ಸರಿಯಾದ ಸ್ಥಳದಲ್ಲಿ ನಿಲ್ಲಿಸಿರದಿದ್ದರೆ ನಿಮ್ಮ ವಾಹನವನ್ನು ಟ್ರಾಫಿಕ್ ಪೊಲೀಸರು ಎತ್ತಿಕೊಂಡು ಹೋಗುವುದು ಸಾಮಾನ್ಯ. ಸುತ್ತಮುತ್ತಲಿನವರನ್ನು ಕೇಳಿ ನಂತರ ಟ್ರಾಫಿಕ್ ಪೊಲೀಸನವರನ್ನು ಸಂಪರ್ಕಿಸಿ ಇಲ್ಲವಾದಲ್ಲಿ ವಾಹನ ಕಳುವಾದ ಬಗ್ಗೆ ದೂರು ನೀಡಿ.
ಪೊಲೀಸ್ ತೆಗೆದುಕೊಳ್ಳಬಹುದಾದ ಕ್ರಮಗಳು:
ನಿಮ್ಮ ಪರವಾನಗೆ ಪತ್ರದಲ್ಲಿರುವಂತೆ ಮಾಹಿತಿಗಳನ್ನು ಪಡೆದು ಅವುಗಳನ್ನು ಕೋರ್ಟ್ಗೆ ಹಾಜರುಪಡಿಸಬಹುದು. ಕೋರ್ಟ್ ಈ ಕುರಿತು ಮುಂದಿನ ಕ್ರಮದಂತೆ ದಂಡ ವಿಧಿಸಬಹುದು. ಆ ದಂಡವನ್ನು ಸರಿಯಾದ ಸಮಯದಲ್ಲಿ ಕೋರ್ಟ್ಗೆ ಪಾವತಿಸತಕ್ಕದ್ದು. ಇಲ್ಲವಾದಲ್ಲಿ ಕೋರ್ಟ್ನಿಂದ ಸಮನ್ಸ್ ಜಾರಿಯಾಗುವುದು. ವಾಹನ ಚಾಲನಾ ಪರವಾನಗಿ ಪತ್ರ ರದ್ದುಗೊಳಿಸಬಹುದು ಅಥವಾ ಜಪ್ತಿ ಮಾಡಬಹುದು. ಸೂಕ್ತ ದಂಡವನ್ನು ಪಾವತಿಸಿ ಸೂಕ್ತ ರಸೀದಿ ಪಡೆಯಿರಿ.
ಕೆಲವು ಪ್ರಮುಖ ಅಪರಾಧಗಳು:
1. ವಾಹನ ಚಲಾಹಿಸುವಾಗ ವಾಹನ ಚಾಲನಾ ಪರವಾನಗಿ ಪತ್ರ ಹೊಂದಿರಬೇಕು.
2. ಪರವಾನಗಿ ಇಲ್ಲದಿರುವವರಿಗೆ ವಾಹನ ಚಲಾಯಿಸಲು ಅವಕಾಶ ನೀಡಬಾರದು.
3. ವಿಮೆ ಮಾಡಿಸದ ವಾಹನಗಳನ್ನು ಚಲಾಯಿಸಬಾರದು.
4. ವೇಗ ನಿಯಂತ್ರಣ ಮುಖ್ಯ
5. ಮದ್ಯಪಾನ ಮಾಡಿ ವಾಹನ ಚಲಾಯಿಸಬಾರದು.
6. ಲೇನ್ ಕಟ್ಟಿಂಗ್ ಮಾಡದಿರಿ.
7. ಒನ್ ವೇ ಇದ್ದಾರ ಅವರ ವಿರುದ್ಧ ಚಾಲನೆ ಬೇಡ.
8. ಸರಿಯಾದ ಹೆಡ್ಲೈಟ್ ಬಳಸಿ
9. ವೈಯಕ್ತಿಕ ವಾಹನಗಳನ್ನು ವ್ಯಾಪಾರದ ಬಳಕೆಗೆ ಬಳಸಬಾರದು.
10. ಸರಕುಗಳನ್ನು ಸರಿಯಾದ ರೀತಿಯಲ್ಲಿ ತೆಗೆದುಕೊಂಡು ಹೋಗಿ.
11. ಟ್ಯಾಕ್ಸಿ ಡ್ರೈವರ್ ವಾಹನಗಳನ್ನು ಓಡಿಸಲು ಇಲ್ಲವೆಂದಲ್ಲಿ / ಹೆಚ್ಚಿನ ಹಣವನ್ನು ಕೇಳಿದಾಗ / ಸಮವಸ್ತ್ರ ಧರಿಸದೇ ಇದ್ದಾಗ ದೂರು ನೀಡಬಹುದು.
12. ಟ್ರಾಫಿಕ್ ಸಿಗ್ನಲ್ಗಳನ್ನು ಪಾಲಿಸದೇ ಇದ್ದಾಗ ದೂರು ನೀಡುವುದು.
No comments:
Post a Comment
please give feedback your reviews, comments which helps me to better in future